ಭಾರತ: ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ‘ಟೆಲಿ ಶಿಕ್ಷಣ’ ಪರಿಣಾಮಕಾರಿ ಫಲ ನೀಡದಿದ್ದರೂ ರಾಜ್ಯ ಶಿಕ್ಷಣ ಇಲಾಖೆ ವಿಸ್ತರಣೆಗೆ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.

ಭಾರತ / ಮಾರ್ಚ್ 18, 2018 / ಲೇಖಕ:  / ಮೂಲ: Vijayavani

ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳಲ್ಲಿ ಕಲಿಕಾ ಮಟ್ಟ ಹೆಚ್ಚಳ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆಯಲ್ಲಿ ಟೆಲಿ ಶಿಕ್ಷಣ ಅನುಷ್ಠಾನ ಮಾಡಿತ್ತು. ಆದರೆ, ಇದು ಪ್ರಯೋಜನವಿಲ್ಲವೆಂದು ಸರ್ಕಾರವೇ ರಚಿಸಿದ ಸಮಿತಿ ನೀಡಿರುವ ವರದಿ ಬಹಿರಂಗ ಪಡಿಸಿದ್ದಲ್ಲದೆ, ಇದನ್ನು ಮುಂದುವರಿಸುವುದು ಬೇಡ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೂ, ಇತ್ತೀಚೆಗೆ ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳ ಸಭೆ ನಡೆಸಿ ಈ ಯೋಜನೆಯನ್ನು ಮತ್ತಷ್ಟು ಶಾಲೆಗಳಿಗೆ ವಿಸ್ತರಿಸಲು ತೀರ್ವನಿಸಿದೆ.

ಟೆಲಿ ಶಿಕ್ಷಣದ ಪ್ರಯೋಜನದ ಬಗ್ಗೆ ಹಲವಾರು ಟೀಕೆಗಳು ಬಂದ ಹಿನ್ನೆಲೆಯಲ್ಲಿ 2017ರಲ್ಲಿ ಅಜೀಂ ಪ್ರೇಮ್ೕ ಫೌಂಡೇಷನ್ ವತಿಯಿಂದ ಯೋಜನೆ ಪ್ರಯೋಜನಗಳ ಕುರಿತು ಮೌಲ್ಯಮಾಪನ ಮಾಡಿಸಲು ತೀರ್ವನಿಸಲಾಯಿತು. ಈ ಫೌಂಡೇಷನ್ ಇತ್ತೀಚೆಗೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಶಿಕ್ಷಣ ಇಲಾಖೆಯು ಐಐಎಂಬಿ ಸಹಯೋಗದೊಂದಿಗೆ ಟಿಲಿ ಶಿಕ್ಷಣ ಜಾರಿಗೊಳಿಸಿದೆ. ಇದರ ಅನುಷ್ಠಾನವಾದ ಮೇಲೆ ಶಿಕ್ಷಣ ಗುಣಮಟ್ಟ ಹೆಚ್ಚಾಗಿದ್ದರೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಗತಿಯನ್ನು ಕಾಣಬೇಕಾಗಿತ್ತು. ಆದರೆ, ಇದು ಸಾಧ್ಯವಾಗಿಲ್ಲ. ಈ ಟೆಲಿ ಶಿಕ್ಷಣಕ್ಕೆ ರಾಜ್ಯ ಸರ್ಕಾರ 64 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಹೆಚ್ಚಿನ ಫಲಪ್ರದಾಯಕವಾಗಿಲ್ಲ ಎಂಬಂಶವನ್ನು ಲೆಕ್ಕ ಪರಿಶೋಧಕರ ಸಮಿತಿ ನೀಡಿರುವ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಈ ಯೋಜನೆ ಮುಂದುವರಿಸಬೇಕಾದಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕೆಂದು ಫೌಂಡೇಷನ್ ನೀಡಿರುವ ವರದಿಯಲ್ಲಿ ಪ್ರಸ್ತಾಪಿಸಿದೆ. ಆದರೆ, ಇದಕ್ಕೆ ಐಐಎಂಬಿ ಆಕ್ಷೇಪ ವ್ಯಕ್ತಪಡಿಸಿದ್ದು, ಡಿಎಸ್​ಇಆರ್​ಟಿ ನೀಡಿದ ನೋಟಿಸ್ ಮೇರೆಗೆ ಕೆಲವು ಅಂಶಗಳಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದೇವೆ ಎಂದು ತಿಳಿಸಿದೆ.

ಟೆಲಿ ಶಿಕ್ಷಣ ಅನುಷ್ಠಾನ: ರಾಜ್ಯ ಸರ್ಕಾರ ಮೊದಲ ಬಾರಿಗೆ 2014 ಮಾರ್ಚ್​ನಲ್ಲಿ ಈ ಟೆಲಿ ಶಿಕ್ಷಣಕ್ಕಾಗಿ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ವೆುಂಟ್ ಬೆಂಗಳೂರು(ಐಐಎಂಬಿ) ಜತೆ ಒಪ್ಪಂದ ಮಾಡಿಕೊಂಡಿತ್ತು. ಸ್ಯಾಟಲೈಟ್ ಮೂಲಕ ಒಂದು ಸಾವಿರ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ನೀಡುವುದು ಪ್ರಮುಖ ಉದ್ದೇಶವಾಗಿತ್ತು. ನವೆಂಬರ್ 2014ರಲ್ಲಿ ಯೋಜನೆ ಅನುಷ್ಠಾನಕ್ಕೆ ಬಂತು. ಜೂನ್ 1ರಿಂದ ಅಕ್ಟೋಬರ್ 31ರವರೆಗೆ ತಾಂತ್ರಿಕ ಕಾರಣಾಂತರದಿಂದ ಯೋಜನೆ ರದ್ದುಗೊಂಡಿತ್ತು. ಈ ಸಂದರ್ಭದಲ್ಲಿ ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ (ಡಿಎಸ್​ಇಆರ್​ಟಿ) ಎರಡು ನೋಟಿಸ್ ನೀಡಿತ್ತು. 2017 ಮೇ 26 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಯನ್ನು ಮೂರನೇ ವ್ಯಕ್ತಿಯಿಂದ ಮೌಲ್ಯಮಾಪನ ಮಾಡಿಸಲು ಮುಂದಾಗಿ, ಅಜೀಂ ಪ್ರೇಮ್ೕ ಫೌಂಡೇಷನ್​ಗೆ ಜವಾಬ್ದಾರಿ ವಹಿಸಿತು. ಫೌಂಡೇಷನ್ ಆಗಸ್ಟ್​ನಲ್ಲಿ ವರದಿಯನ್ನು ನೀಡಿತ್ತು. 2018 ಜನವರಿ 29ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಯೋಜನೆಯನ್ನು ರಾಜ್ಯದಲ್ಲಿ ಕಂಪ್ಯೂಟರ್ ಸೌಕರ್ಯ ಹೊಂದಿರುವ ಎಲ್ಲ ಸರ್ಕಾರಿ ಶಾಲೆಗಳಿಗೂ ವಿಸ್ತರಿಲು ತೀರ್ವನಿಸಲಾಯಿತು.

ಸುದ್ದಿ ಮೂಲ:

ಟೆಲಿ ಶಿಕ್ಷಣ ನಿಲ್ಲಿಸಲು ರಾಜ್ಯ ಸರ್ಕಾರ ನಕಾರ!

Comparte este contenido:

Deja un comentario

Tu dirección de correo electrónico no será publicada.

Este sitio usa Akismet para reducir el spam. Aprende cómo se procesan los datos de tus comentarios.